ದಂಡುಪಾಳ್ಯ 3, 2018ರ ಕ್ರೈಂ ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನು ಶ್ರೀನಿವಾಸ ರಾಜು ನಿರ್ದೇಶಿಸಿದ್ದಾರೆ. ರಾಮ್ ತಲ್ಲುರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ದಂಡುಪಾಳ್ಯದ ಕುಖ್ಯಾತ ಡಕಾಯಿತರ ಗುಂಪನ್ನು ಆಧರಿಸಿದ ಚಿತ್ರ ಇದಾಗಿದೆ, 2017 ರಲ್ಲಿ ಬಿಡುಗಡೆಯಾದ ದಂಡುಪಾಳ್ಯ 2 ಚಿತ್ರದ ಮುಂದುವರಿದ ಭಾಗ. ದಂಡುಪಾಳ್ಯ ಚಿತ್ರ ಸರಣಿಯಲ್ಲಿ ಇದು 3 ನೇ ಚಿತ್ರ. ಪೂಜಾ ಗಾಂಧಿ ತಮ್ಮ ಹಿಂದಿನ ಚಿತ್ರಗಳಲ್ಲಿನ ಪಾತ್ರವನ್ನು ಮುಂದುವರಿಸಿದ್ದಾರೆ, ಮುಖ್ಯ ಪಾತ್ರಗಳಲ್ಲಿ ಪಿ. ರವಿಶಂಕರ್, ಮಕ್ರಂದ್ ದೇಶಪಾಂಡೆ, ಸಂಜನಾ, ರವಿ ಕಾಳೆ ಮತ್ತು ಪೆಟ್ರೋಲ್ ಪ್ರಸನ್ನ ತಮ್ಮ ಪಾತ್ರಗಳನ್ನು ಮುಂದುವರೆಸಿದ್ದಾರೆ. ರ್ಜುನ್ ಜನ್ಯಾ ಸಂಗೀತ ಮತ್ತು ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರವು ದಂಡುಪಾಳ್ಯ ಚಿತ್ರ ಸರಣಿಯ ಕೊನೆಯ ಚಿತ್ರವಾಗಿದೆ. ಚಿತ್ರದ ಬಹುತೇಕ ಭಾಗ ಎರಡನೇ ಭಾಗದ ಚಿತ್ರೀಕರಣದ ವೇಳೆಯೇ ಚಿತ್ರೀಕರಿಸಲಾಯಿತು. ಚಿತ್ರವು 16 ಮಾರ್ಚ್ 2018 ರಂದು ಬಿಡುಗಡೆಯಾಯಿತು. ಈ ಚಿತ್ರಕ್ಕೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು, ಆದರೆ ಒಳ್ಳೆಯ ದುಡ್ಡು ಮಾಡಿತು. == ಪಾತ್ರವರ್ಗ == ಪೂಜಾ ಗಾಂಧಿ ಮಕರಂದ ದೇಶಪಾಂಡೆ ಪಿ. ರವಿಶಂಕರ್ ರವಿ ಕಾಲೆ ಸಂಜನಾನಾ ಶೃತಿ ಕರಿ ಸುಬ್ಬು ಪೆಟ್ರೋಲ್ ಪ್ರಸನ್ನ ಆದಿ ಲೋಕೇಶ್ ಡ್ಯಾನಿ ಜಯದೇವ್ ಮುನಿ